Jogi

ಕ್ಷಣಿಕ ಜ್ಞಾನ

ಜ್ಞಾನೋದಯ ಆದವರ ಜೊತೆ ನಾವು ಇದ್ದರೆ ನಮಗೆ ಜ್ಞಾನೋದಯ ಆಗಲ್ಲ. ಆದರೆ ಇವತ್ತಿನ ಸ್ಥಿತಿಯಲ್ಲಿ ನಿಮಗೆ ಪ್ರತಿದಿನ ಜ್ಞಾನೋದಯ ಆಗ್ತಾ ಇರುತ್ತೆ. ಒಂದೊಂದು ಕ್ಷಣಕ್ಕೆ ಒಂದೊಂದು ಜ್ಞಾನ. ಈ ಸಣ್ಣ ಸಣ್ಣ ಜ್ಞಾನೋದಯಗಳಲ್ಲೇ ನಮ್ಮಂತ ಹುಲುಮಾನವರ ಜೀವನ ಇದೆ.
— ಗಿರೀಶ್ ರಾವ್ ಜೋಗಿ (ಗೌರೀಶ್ ಅಕ್ಕಿಯವರೊಂದಿಗಿನ ಸಂದರ್ಶನದಲ್ಲಿ)


ಅವರು ಹೇಳ್ತಾ ಇರೋದು ಈ ಗಳಿಗೆ ನನಗೆ ಹೊಳೆದಿದ್ದು sacred ಅಂತ..
— ಪ್ರಕಾಶ್ ಬೆಳವಾಡಿ. (ಸುಬ್ಬಣ್ಣ ಅವರೊಂದಿಗೆ ನೆಡೆಸಿದ ಸಂದರ್ಶನದ ನೆನಪು )

Inevitable people

The Graveyard is full of inevitable people ಯಾರೋ ಅಂದರು. ಸ್ಮಶಾನದ ತುಂಬ ನಾನು ತುಂಬ ಅನಿವಾರ್ಯ ಅಂದುಕೊಂಡವರ ಸಮಾಧಿ. ನಾವು ದುಡಿಯದೇ ಹೋದರೆ ಏನೇನೋ ಆಗುತ್ತದೆ ಅಂದುಕೊಳ್ಳುತ್ತೇವೆ. ತಾನು ನಟಿಸದೇ ಹೋದರೆ ಜನರಿಗೆ ಮನರಂಜನೆಯೇ ಸಿಗುವುದಿಲ್ಲ ಅಂತ ಸೂಪರ್ ಸ್ಟಾರ್ ಭಾವಿಸುತ್ತಾನೆ. ತಾನು ಹಾಡದೇ ಹೋದರೆ ಜನಗಣಮನ ಮೌನವಾಗುತ್ತದೆ ಎಂದು ಭಾವಿಸುತ್ತಾರೆ. ಹಾಗೆ ಏನೇನೋ ಅಂದುಕೊಂಡು ದುಡಿಯುತ್ತೇವೆ. ಹಣಕ್ಕೆ, ಹೆಸರಿಗೆ, ಸುಮ್ಮನಿರಲಾಗದ್ದಕ್ಕೆ. ಯಾವ ಪುರುಷಾರ್ಥಕ್ಕೆ ಅಂತ ಕೇಳಿದರೆ ಸಾಕು ಭಗವದ್ಗೀತೆ ಹಾಜರಾಗುತ್ತದೆ; ಕರ್ಮಣ್ಯವಾಧಿಕಾರಸ್ತೇ. ಇದ್ಯಾವ ಕರ್ಮದ ರಸ್ತೆ!

– Saavu (Girish Rao Jogi)