from youtube

I write to know

ನನ್ನ ಬರವಣಿಗೆ ಬಗ್ಗೆ ನಾನು ಮಾತಾಡೋದು ಬಹಳ ಕಷ್ಟ. post event wisdom ಆಗುತ್ತದೆ ಅದು.
ಬರೆದಾದ ಮೇಲೆ ನಾವು ಅದರ ಬಗ್ಗೆ ಹೀಗೆ-ಹಾಗೆ ಅಂತ ಅಂದುಕೊಂಡು ಮಾತಾಡ್ತೀವಿ. ಆಗುವಾಗ ಅದು ಗೊತ್ತಿರೋದಿಲ್ಲ.

ಎರಡು ರೀತಿಯ ಬರಹಗಾರರು ಇರ್ತಾರೆ. ಕೆಲವರು ತಾವು ಬರೆಯುವುದನ್ನು ಮೊದಲೇ ನಿಖರವಾಗಿ ಯೋಚನೆ ಮಾಡಿ ಬರೆಯುತ್ತಾರೆ. walking ಹೋಗಬೇಕಾದರೆಲ್ಲ think ಮಾಡಿ ಮನೆಗೆ ಬಂದು, ಸ್ಪಷ್ಟವಾಗಿ ಎಲ್ಲವನ್ನೂ ಹೀಗೆ-ಹಾಗೆ ಅಂತ ಬರೆದು, structure ಮಾಡುತ್ತಾರೆ. ಕೆಲವರು ಇಂಪಲ್ಸಿವ್ ಆಗಿ ಬರೀತಾರೆ. ನಾನು ನನ್ನ ಮೊದಲ ಸೆಂಟೆನ್ಸ್ ಬರೆಯೋ ತನಕ ನನಗೆ ಮುಂದಿನ ಕಥೆ ಏನಾಗುತ್ತೆ ಅನ್ನೋದರ ಬಗ್ಗೆ ಗೊತ್ತಿರೋದಿಲ್ಲ. ಅದಕ್ಕಾಗಿ ಬರೆಯೋದು ನಾನು.

ಚಿತ್ತಾಳರು ಕೂಡ ನನಗೆ ಒಂದು ಸಲ ಹೇಳಿದ್ರು. ಅದು ನನ್ನ ತಲೆಯಲ್ಲಿ ಉಳಿಯಿತು. He said– I don’t write what I know. I write to know.
ಅವರು ಹೇಳಿದ್ದು ನನಗೆ ಒಂದು ಮಹತ್ವದ ಸಮಯದಲ್ಲಿ ಅರ್ಥ ಆಯ್ತು. ನಾನು ಬರೀತೀನಿ ಅನ್ನೋದು – “ನಾನು” ಮಹಾ ದೊಡ್ಡ ಏರೋಗೆನ್ಸ್ ಆಗೋಯ್ತು. ಅಂದರೆ, ನನಗೇನೋ ಗೊತ್ತಿದೆ, ಉಳಿದವರಿಗೆ ಗೊತ್ತಿಲ್ಲ, ಅವರಿಗೆ ನಾನು ಪ್ರೀಚ್ ಮಾಡೋಕೆ ಬರೀತೀನಿ ಅಂದಂತೆ.

Jayanta Kaykini in an event